ಸಂವಿಧಾನದ ಪ್ರಮುಖ ಲಕ್ಷಣಗಳು | Key Features Of The Constitution #
personLLB Exam & Immigration Related Content
November 19, 2022
0
share
ಸಂವಿಧಾನದ ಪ್ರಮುಖ ಲಕ್ಷಣಗಳು
ಸಂವಿಧಾನದ ಪ್ರಮುಖ ಲಕ್ಷಣಗಳು | Key Features Of The Constitution
ಫ್ರೆಂಚ್ ಕ್ರಾಂತಿಯಿಂದ ( ಫ್ರೆಂಚ್.ಸ ) ( 1789-1799ರಲ್ಲಿ ಪ್ರಸ್ತಾವನೆಯಲ್ಲಿರುವ ಗಣರಾಜ್ಯ , ಸ್ವಾತಂತ್ರ್ಯ , ಸಮಾನತೆ , ಬಾತೃತ್ವ ಎಂಬ ಪದವನ್ನು ಎರವಲು ಪಡೆಯಲಾಗಿದೆ 1917 ರ ರಷ್ಯಾದ ಕ್ರಾಂತಿಯಿಂದ ಪ್ರಸ್ತಾವನೆಯ ನ್ಯಾಯ ( ರಾಜಕೀಯ ಆರ್ಥಿಕ ಸಮಾಜಿಕ ) ಎಂಬ ಧೈಯಗಳನ್ನು ಎರವಲು ಪಡೆಯಲಾಯಿತು . ಅಮೆರಿಕಾ ಸಂವಿಧಾನವು ಕೇವಲ 7 ವಿಧಿಗಳನ್ನು ಒಳಗೊಂಡಿದ್ದು , ಜಗತ್ತಿನ ಅತ್ಯಂತ ಸಣ್ಣ ಲಿಖಿತ ಸಂವಿಧಾನವೆಂದು , ಸೆ .17,1787 ರಲ್ಲಿ ಅಳವಡಿಸಿಕೊಂಡಿತು . ಧರ್ಮ ನಿರಪೇಕ್ಷಿತ ಎಂದರೆ ಯಾವ ಧರ್ಮವು ಹೆಚ್ಚು , ಯಾವ ಧರ್ಮವು ಕಡಿಮೆಯಲ್ಲ , ಎಲ್ಲವೂ ಸಮಾನ ಎಂಬ ಭಾವನೆ . ಜರ್ಮನಿಯ ವೈಮರ್ ಸಂವಿಧಾನದಿಂದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ವಚಾ ಮಾಡುವುದು ಎರವಲು ಪಡೆಯಲಾಗಿದೆ
ಭಾರತದ ಸಂವಿಧಾನ ಲಕ್ಷಣಗಳು
ರಷ್ಯಾಸಂವಿಧಾನದಿಂದ ಮೂಲಭೂತ ಕರ್ತವ್ಯಗಳು , ಪ್ರಸ್ತಾವನೆಯಲ್ಲಿರುವ ರಾಜಕೀಯ ಸಮಾಜಿಕ ನ್ಯಾಯದ ಧೈಯಗಳು ಎರವಲು ಪಡೆಯಲಾಗಿದೆ . ದಕ್ಷಿಣ ಆಫ್ರಿಕಾದ ಸಂವಿಧಾನದಿಂದ ಸಂವಿಧಾನದ ತಿದ್ದುಪಡಿ ವಿಧಾನ ಹಾಗೂ ರಾಜ್ಯಸಭೆ ಸದಸ್ಯರ ಚುನಾವಣೆಗಳನ್ನು ಎರವಲು ಪಡೆಯಲಾಗಿದೆ . ಕೆನಡಾ ದೇಶದ ಸಂವಿಧಾನದಿಂದ ಪ್ರಬಲಗೊಂಡ ಕೇಂದ್ರಕೇಂದ್ರದ ಶೇಷಾಧಿಕಾರ ಕೇಂದ್ರದಿಂದ ರಾಜ್ಯಪಾಲರ ನೇಮಕ , ಎರವಲು ಪಡೆಯಲಾಗಿದೆ . ಜಪಾನ್ ಸಂವಿಧಾನದಿಂದ ಸುಪ್ರೀಂಕೋರ್ಟಿನ ನ್ಯಾಯಾಧೀಕರಣ ಸಲಹೆ ಕಾನೂನಿನಿಂದ ರಚಿಸಿದ ವಿಧಾನಗಳನ್ನು ಎರವಲು ಪಡೆಯಲಾಗಿದೆ . ಬ್ರಿಟನ್ನಿನ ಪಾರ್ಲಿಮೆಂಟನ್ನು ‘ ವೆಸ್ಟ್ ಮಿನಿಸ್ಟರ್ ‘ ಪಾರ್ಲಿಮೆಂಟ್ ಎನ್ನುವರು . ಕಾರಣ ಅದು ವೆಸ್ಟ್ ಮಿನಿಸ್ಟರ್ ನಗರದಲ್ಲಿದೆ . Bharatada Samvidhana Lakshanagalu in Kannada
ರಷ್ಯಾದ ಕ್ರಾಂತಿಯು ಗ್ರೆಗೊರಿಯನ್ ಕ್ಯಾಲೆಂಡರ್ ಪ್ರಕಾರ 1917 ರ ಮಾರ್ಚ್ನಲ್ಲಿ ಜರುಗಿತು . ಲಿಖಿತವಲ್ಲದ ಸಂವಿಧಾನಗಳನ್ನು ಹೊಂದಿರುವ ದೇಶ – ನ್ಯೂಜಿಲೆಂಡ್ , ಯು.ಕೆ , ಇಸ್ರೇಲ್ , ಕುದ್ದಿಯಾ ಅಜುಲ್ಲಾ ರಸುಲ್ಲಾ ಸಂವಿಧಾನದ ರಚನಾ ಸಭೆಯಲ್ಲಿದ್ದ ಏಕೈಕ ಮುಸ್ಲಿಂ ಮಹಿಳೆ , ಭಾರತದ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದವರು ಆಂಧ್ರಪ್ರದೇಶ ಪಿಂಗಾಲಿ ವೆಂಕಯ್ಯ . 1600 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾಯಿತು . 1600 ಡಿ .31 ರಂದು ಬ್ರಿಟನ್ ರಾಣಿ ಎಲಿಜಬೆತ್ ರವರು ಭಾರತ ಹಾಗೂ ಇತರ ಪೂರ್ವ ದೇಶಗಳೊಂದಿಗೆ ವ್ಯಾಪಾರ ಮಾಡಲು ಸನ್ನದ್ದು ನೀಡಿದರು . ಭಾರತಕ್ಕೆ ವ್ಯಾಪಾರಕ್ಕೆ ಬಂದವರಲ್ಲಿ , ಪೂರ್ಚುಗೀಸರು ಮೊದಲಿಗರು , ಎರಡನೇಯವರು ಹಾಲೆಂಡಿನ ಡಚ್ಚರು ಮೂರನೇಯವರು ಬ್ರಿಟೀಷರು, ನಾಲ್ಕನೇಯವರು ಫ್ರೆಂಚರು .
ಬ್ರಿಟಿಷರು ಜಾರಿಗೆ ತಂದ ಕಾಯ್ದೆಗಳೆಂದರೆ
1 ) 1773 ರ ರೆಗ್ಯೂಲೇಟಿಂಗ್ ಕಾಯ್ದೆ 2 ) 1784 ರ ಪಿಟ್ಸ್ ಇಂಡಿಯಾ ಕಾಯ್ದೆಗಳು 3 ) 1813 ರ ಚಾರ್ಟರ್ ಕಾಯ್ದೆ 4 ) 1833 ರ ಚಾರ್ಟರ್ ಕಾಯ್ದೆ 5 ) 1853 ರ ಚಾರ್ಟರ್ ಕಾಯ್ದೆ 6 ) 1858 ರ ಭಾರತ ಸರ್ಕಾರ ಕಾಯ್ದೆ 7 ) 1861 , ಕಾಯ್ದೆ ,1892 ರ ಭಾರತ ಕೌನ್ಸಿಲ್ ಕಾಯ್ದೆ 8 ) 1909 ರ ಮಿಂಟೋ – ಮಾರ್ಲೆ ಕಾಯ್ದೆ 9 ) 1919 ರ ಮಾಂಟೆಗೊ ಚೇಮ್ಫರ್ಡ್ 10 ) 1935 ರ ಭಾರತ ಸರ್ಕಾರ ಕಾಯ್ದೆ ,
ಸರ್ ಎಡ್ರಿನ್ ಮಾಂಟೆಗೊರವರು ಭಾರತಕ್ಕೆ ಸೆಕ್ರೆಟರಿ ಆಗಿದ್ದರು . ಲಾರ್ಡ್ ಚೇಮ್ಸ್ಫರ್ಡ್ರವರು ಭಾರತದ ವೈಸ್ರಾಯ್ ಆಗಿದ್ದರು . ಮೊದಲ ಮಹಾಯುದ್ಧವು 28 , ಜುಲೈ , 1914 ರಿಂದ 11.ನ , 1918 ರವರೆಗೆ ನಡೆಯಿತು . 1919 ಜೂ .28 ರಂದು ವರ್ಸೇಲ್ಸ್ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಮೊದಲ ಮಹಾಯುದ್ಧವು ನಿಂತು ಹೋಯಿತು . 1919 ರ ಮಾಂಟೆಗೊ ಚೇಮ್ಸ್ಫರ್ಡ್ ಕಾಯ್ದೆ ಪ್ರಕಾರ “ ದ್ವಿ ಸರ್ಕಾರ ” ಪದ್ಧತಿ ಜಾರಿಗೆ ಬಂದಿತು . ಸೈಮನ್ ಆಯೋಗವು 1927 ಫೆಬ್ರವರಿ 3 ರಂದು ಬಾಂಬೆಗೆ ಬಂದಿಳಿಯಿತು . ಲಾಲಲಜಪತ ರಾಯ್ರವರು ಈ ಪ್ರತಿಭಟನೆಯಲ್ಲಿ ಬ್ರಿಟಿಷ್ ಪೋಲಿಸ್ ಅಧಿಕಾರಿ ಸ್ಯಾಂಡರ್ಸ್ ಮಾಡಿಸಿದ ಲಾಠಿ ಪ್ರಹಾರದಿಂದ 1928 ನವಂಬರ್ 17 ರಂದು ನಿಧನರಾದರು . ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 ಮೇ 10 ರಂದು ಮೀರತ್ನಲ್ಲಿ ಮೊಟ್ಟ ಮೊದಲ ಬಾರಿಗೆ ಜರುಗಿತು .
1885 ರಲ್ಲಿ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾಯಿತು . ಸುಪ್ರೀಂಕೋರ್ಟ್ 26.ಮಾರ್ಚ್ , 1774 ರಲ್ಲಿ ಕಲ್ಕತ್ತಾದಲ್ಲಿ ಸ್ಥಾಪನೆಯಾಯಿತು . 1773 ರಿಂದ 1858 ರವರೆಗಿನ ಬ್ರಿಟಿಷರು ಜಾರಿಗೆ ತಂದ ಕಾಯ್ದೆಗಳನ್ನು ಕಂಪನಿ ಕಾಯ್ದೆಗಳು ಎನ್ನುತ್ತಾರೆ . 1773 , ಅ .20 ರಂದು ವಾರನ್ ಹೇಸ್ಟಿಂಗ್ರವರು ಬಂಗಾಳದ ಮೊದಲ ಗೌರ್ರ್ ಜನರಲ್ ಆಗಿದ್ದರು . 1774 ರಿಂದ 1833 ರವರೆಗಿನ ಗೌರ ಜನರಲ್ಗಳನ್ನು ಗೌರ ಆಫ್ ದಿ ಪ್ರೆಸಿಡೆನ್ಸ್ ಆಫ್ ಪೋರ್ಟ್ವಿಲಿಯಂ ( ಬಂಗಾಳ ) ಎಂದು ಕರೆಯುತ್ತಿದ್ದರು . 1833 ರಿಂದ 1858 ರವರೆಗೆ ಗೌರರ್ ಜನರಲ್ ಆಫ್ ಇಂಡಿಯಾ ಎಂದು ಕರೆಯುತ್ತಿದ್ದರು . ವಿಲಿಯಂ ಬೆಂಟಿಕ್ರವರು ( 1833 ರಿಂದ 1835 ರವರೆಗೆ ) ಮೊಟ್ಟ ಮೊದಲ ಭಾರತದ ಗೌರರ್ ಜನರಲ್ ಆಗಿ ನೇಮಕವಾಗಿದ್ದರು . 1858 ರಿಂದ 1947 ರವರೆಗಿನ ಬ್ರಿಟಿಷರು ಮಾಡಿದ ಕಾಯ್ದೆಗಳನ್ನು ಬ್ರಿಟಿಷ್ ಸರ್ಕಾರದ ಕಾಯ್ದೆ ” ಗಳೆಂದು ಕರೆಯುತ್ತಾರೆ .
ಆ .2 , 1858 ರಂದು ಬ್ರಿಟಿಷ್ ಸಂಸತ್ತಿನಲ್ಲಿ ಕಾಯ್ದೆಯನ್ನು ಅಂಗೀಕರಿಸಿ ಭಾರತಕ್ಕೆ 1858 ರ ಭಾರತ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿದರು . ಬ್ರಿಟಿಷ್ ರಾಣಿ ವಿಕ್ಟೋರಿಯಾರವರು ನ .1 , 1858 ರಲ್ಲಿ ಒಂದು ಘೋಷಣೆಯನ್ನು ಹೊರಡಿಸಿದರು ಆ ಘೋಷಣೆಯನ್ನೇ ವಿಕ್ಟೋರಿಯಾ ಘೋಷಣೆ ಎನ್ನುವರು . 1858 ರಿಂದ ಕಂಪನಿ ಆಡಳಿತವು ಬ್ರಿಟನ್ಗೆ ವರ್ಗಾವಣೆ ಆಯಿತು . ಭಾರತದ ಮೊಟ್ಟ ಮೊದಲ ವೈಸರಾಯ್ ಆಗಿ “ ಲಾರ್ಡ್ ಕ್ಯಾನಿಂಗ್ ನೇಮಕಗೊಂಡರು . 1909 ರಲ್ಲಿ ಜಾರಿಗೆ ತಂದ ಕಾಯ್ದೆಯನ್ನು ‘ ಮಿಂಟೋ – ಮಾರ್ಲೆ ಸುಧಾರಣೆ ‘ ( ಭಾರತದ ಕೌನ್ಸಿಲ್ ಆಕ್ಸ್ ) ಎನ್ನುವರು . ಮುಸ್ಲಿಂರಿಗೆ 1909 ರ ಕಾಯ್ದೆಯಲ್ಲಿ ಮುಸ್ಲಿಂರಿಗೆ ಪ್ರತ್ಯೇಕ ಚುನಾವಣಾ ಪ್ರಾತಿನಿಧ್ಯವನ್ನು ನೀಡುವ ‘ ಪ್ರತ್ಯೇಕ ಚುನಾವಣಾ ಮತಗಟ್ಟೆ ‘ ಜಾರಿಗೆ ತರಲಾಯಿತು . ಮಿಂಟೋರವರನ್ನು “ Father of communal Electrorate ” ಎನ್ನುವರು . ಸತ್ಯೇಂದ್ರ ಪ್ರಸಾದ್ ಸಿನ್ಹಾರವರು ಮೊದಲ ಭಾರತೀಯ ವೈಸ್ರಾಯ್ ಕಾರ್ಯಕಾರಿ ಮಂಡಳಿಗೆ ಕಾನೂನು ಸದಸ್ಯರಾಗಿ ಸೇರ್ಪಡೆಯಾದರು . 1919 ರ ಭಾರತ ಸರ್ಕಾರ ಕಾಯ್ದೆಯನ್ನು ಮಾಂಟೊ – ಚೇಮ್ಸ್ಫರ್ಡ್ ಸುಧಾರಣೆ ಎನ್ನುವರು . ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ನ 1920 , ಅಕ್ಟೋಬರ್ .31 ರಂದು ಮುಂಬೈನಲ್ಲಿ ನಡೆದ ಮೊದಲ ಅಧಿವೇಶನದ ಅಧ್ಯಕ್ಷತೆಯನ್ನು ಲಾಲಲಜಪತರಾಯ್ರವರು ವಹಿಸಿದ್ದರು . ಸೈಮನ್ ಆಯೋಗವು 1929 ಏ .14 ರಂದು ಇಂಗ್ಲೆಂಡಿಗೆ ವಾಪಸ್ಸಾಯಿತು . ಜಲಿಯನ್ ವಾಲಾಬಾಗ್ ದುರಂತವು ಏ .13 , 1919 ರಲ್ಲಿ ಪಂಜಾಬ್ನ ಅಮೃತ ಸರದ ಬಳಿ ಜರುಗಿತು . ಏಪ್ರಿಲ್ .1 , 1935 ರಲ್ಲಿ ಭಾರತದ ರಿಸರ್ವ್ ಬ್ಯಾಂಕ್ನ್ನು ಸ್ಥಾಪಿಸಲಾಯಿತು . Hilton young Commission ನೀಡಿದ ವರದಿ ಆಧರಿಸಿ ರಿಸರ್ವ್ ಬ್ಯಾಂಕ್ನ್ನು ಭಾರತದಲ್ಲಿ ಸ್ಥಾಪಿಸಲಾಯಿತು . 1930 , 1931 , 1932 ರಲ್ಲಿ ಲಂಡನ್ನಿನಲ್ಲಿ ಮೂರು ದುಂಡು ಮೇಜಿನ ಸಮ್ಮೇಳನಗಳು ನಡೆದವು . ಮೂರು ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ್ದವರು – ಡಾ.ಬಿ.ಆರ್.ಅಂಬೇಡ್ಕರ್ರವರು . ಮೊದಲ ದುಂಡು ಮೇಜಿನ ಸಮ್ಮೇಳನವನ್ನು ಉದ್ಘಾಟಿಸಿದವರು ಬ್ರಿಟನ್ ದೊರೆ ಜಾರ್ಜ್ ಮೊದಲ ದುಂಡು ಮೇಜು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು -ಬ್ರಿಟನ್ ಪ್ರಧಾನಿ ರಾಮ್ಸೇ ಮ್ಯಾಕ್ ಡೊನಾಲ್ಡ್ ಲಾಲಲಜಪತರಾಯ್ರವರನ್ನು ‘ ಪಂಜಾಬ್ ಕೇಸರಿ ‘ ಎಂದು ಕರೆಯುತ್ತಿದ್ದರು . ಇವರು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಸ್ಥಾಪಕರು . Bharatada Samvidhana Lakshanagalu in Kannada
ಲಾಲಲಜಪತ್ರಾಯ್ರವರು ಸರ್ವೆಂಟ್ಸ್ ಆಫ್ ದಿ ಪೀಪಲ್ ಸೊಸೈಟಿ ಎಂಬ ಸಂಘಟನೆಯನ್ನು ಸ್ಥಾಪಿಸಿದರು . 1931 ಮಾರ್ಚ್ 5 ರಂದು ಗಾಂಧಿ – ಇಲ್ಡನ್ ನಡುವೆ ಒಪ್ಪಂದ ನಡೆಯಿತು . ಜೂನ್ 3 , 1947 ರಂದು ಭಾರತದ ವೈಸ್ರಾಯ್ ಮೌಂಟ್ ಬ್ಯಾಟನ್ರವರು ವಿಭಜನೆ ಸೂತ್ರವನ್ನು ಮುಂದಿಟ್ಟರು . ಈ ಸೂತ್ರವನ್ನು “ ಜೂನ್ ಸೂತ್ರ ‘ ಎನ್ನುವರು . ಗೌರರ್ ಜನರಲ್ , ಇವರ ಪೂರ್ಣ ಹೆಸರು ಲೂಯಿಸ್ ಫಾನ್ಸಿಸ್ ಅಲ್ಬರ್ಟ್ ವಿಕ್ಟರ್ ನಿಕೋಲಸ್ ಮೌಂಟ್ ಲಾರ್ಡ್ ಮೌಂಟ್ಬ್ಯಾಟನ್ರವರು ಭಾರತದ ಕೊನೆಯ ವೈಸರಾಯ್ ಹಾಗೂ ಸ್ವತಂತ್ರ ಭಾರತದ ಮೊಟ್ಟ ಮೊದಲ ನಡೆಸಲಾಯಿತು . ಬ್ಯಾಟನ್ . 1951 ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಲಾಯಿತು . 1952 ರಲ್ಲಿ ಚುನಾವಣೆಯನ್ನು ನಡೆಸಿದರು. ಸಂವಿಧಾನ ರಚನೆಗೆ ಮೊಟ್ಟ ಮೊದಲ ಬಾರಿಗೆ 1934 ರಲ್ಲಿ ಒತ್ತಾಯಿಸಿದವರು ಸಮಾಜವಾದಿ ಎಂ.ಎನ್.ರಾಯ್ರವರು , ಎಂ.ಎನ್.ರಾಯ್ರವರು ಮೆಕ್ಸಿಕೋ ಮತ್ತು ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷವನ್ನು ಕಟ್ಟಿದವರು . 2 ನೇ ಮಹಾಯುದ್ದ ಬಳಿಕ ಸಂವಿಧಾನ ರಚನಾ ಸಭೆ ರಚಿಸಲು ಅವಕಾಶ ಕಲ್ಪಿಸಲು ಆ .8 , 1940 ರಂದು ಬಿಟ ಒಪ್ಪಿಕೊಂಡಿತು . ಇದನ್ನು “ ಆಗಸ್ಟ್ ಕೊಡುಗೆ ” ಎನ್ನುವರು . ಸಂವಿಧಾನ ರಚನಾ ಸಭೆ ಬೇಡಿಕೆ ಈಡೇರಿಸಲು ಮಾರ್ಚ್ , 22 , 1942 ರಲ್ಲಿ ಕ್ರಿಪ್ಸ್ ಆಯೋಗವನ್ನು ಬ್ರಿಟನ್ ಭಾರತಕ್ಕೆ ಕಳುಹಿಸಿತು . ” ಸರ್.ಸ್ಟ್ಯಾಫೋರ್ಡ್ ಕಿಪ್ಸ್ ” ರವರು ಕ್ರಿಪ್ಸ್ ಆಯೋಗದ ಅಧ್ಯಕ್ಷತೆ ವಹಿಸಿದ್ದರು . ಸರ್.ಸ್ಟ್ಯಾಮೋರ್ಡ್ ಕಿಪ್ಪರವರು ಬ್ರಿಟನ್ನ ಪ್ರಧಾನ ಮಂತ್ರಿ ಎನ್ಸ್ಟನ್ ಚರ್ಚಿಲ್ ರವರ ಸಂಪುಟದ ಸದಸ್ಯರು , Bharatada Samvidhana Lakshanagalu in Kannada
ಕ್ರಿಪ್ಸ್ ಆಯೋಗದ ಸಲಹೆಗಳನ್ನು ಮುಸ್ಲಿಂಲೀಗ್ ತಿರಸ್ಕರಿಸಿ ಪ್ರತ್ಯೇಕ ಮುಸ್ಲಿಂ ರಾಜ್ಯವನ್ನು ಸ್ಥಾಪಿಸಿ ಎರಡು ಸಂವಿಧಾನರಚನಾ ಸಭೆಯನ್ನು ರಚಿಸಬೇಕೆಂದು ಒತ್ತಾಯಿಸಿತು . ಸಂವಿಧಾನ ರಚನಾ ಸಭೆಯ ಬೇಡಿಕೆ ಈಡೇರಿಸಲು 1946 , ಮಾರ್ಚ್ 23 ರಂದು ಆಟ್ಲರವರ ಅಧ್ಯಕ್ಷತೆಯಲ್ಲಿ ಲಾರ್ಡ್ ಪೆತಿಕ್ ಲಾರೆನ್ಸ್ ಸ್ಪ್ಯಾಮೋರ್ಡ್ ಕ್ರಿಪ್ಸ್ ಮತ್ತು ಎ.ವಿ. ಅಲೆಕ್ಸಾಂಡರ್ ಒಳಗೊಂಡ ಕ್ಯಾಬಿನೆಟ್ ಆಯೋಗವು ಭಾರತಕ್ಕೆ ಕಳುಹಿಸಲಾಯಿತು . ಕ್ಯಾಬಿನೆಟ್ ಆಯೋಗವು 1946 , ನವಂಬರ್ನಲ್ಲಿ ಒಂದು ಯೋಜನೆಯನ್ನು ರೂಪಿಸಿ ಭಾರತದ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿತು . ಕ್ಯಾಬಿನೆಟ್ ಆಯೋಗವು ಸಂವಿಧಾನ ರಚನಾ ಸಭೆಗೆ ಒಟ್ಟು ಸದಸ್ಯರ ಸಂಖ್ಯೆಯನ್ನು 389 ಕ್ಕೆ ನಿಗಧಿಪಡಿಸಿತು . 389 ಸದಸ್ಯರಲ್ಲಿ 296 ಸ್ಥಾನಗಳು ಬ್ರಿಟೀಷ್ ಇಂಡಿಯಾ ಹಾಗೂ 93 ಸ್ಥಾನಗಳು ದೇಶೀಯ ರಾಜ್ಯಗಳಿಗೂ ಅವಕಾಶ ಕಲ್ಪಿಸಿತು . 296 ಬ್ರಿಟೀಷ್ ಸ್ಥಾನಗಳಲ್ಲಿ , 292 ಸ್ಥಾನಗಳನ್ನು !! ಗೌರರ್ ಪ್ರಾಂತ್ಯಗಳಿಂದಲೂ ಉಳಿದ ನಾಲ್ಕ ಸ್ಥಾನಗಳನ್ನು ನಾಲ್ಕು ಚೀಫ್ ಕಮೀಷನರ್ಗಳ ಪ್ರಾಂತ್ಯ ಗಳಿಂದ ತಲಾ ಒಂದರಂತೆ ಆಯ್ಕೆ ಮಾಡಬೇಕೆಂದು 11 ನಿಗಧಿಪಡಿಸಿತು . Bharatada Samvidhana Lakshanagalu in Kannada
ಸಂವಿಧಾನ ರಚನಾ ಸಭೆಯಲ್ಲಿ ವಿವಿಧ ಸಮುದಾಯದಿಂದ ಪ್ರತಿನಿಧಿಸಿದ ಪ್ರಮುಖರು ಆಂಗ್ಲೋ ಇಂಡಿಯನ್ ಫ್ರಾಂಕ್ ಆಂಥೋನಿ , ಕಮ್ಯೂನಿಸ್ಟ್ – ಸೋಮನಾಥ ಲಹರಿ , ಪರಿಶಿಷ್ಟ ಜಾತಿ- ಡಾ | ಬಿ.ಆರ್.ಅಂಬೇಡ್ಕರ್ ಮೊದಲ ಸಂವಿಧಾನ ರಚನಾ ಸಭೆಯು 1946 ಡಿಸೆಂಬರ್ 9 , ಸೋಮವಾರ ಬೆಳಿಗ್ಗೆ 11 ಗಂಟೆಗೆ ದೆಹಲಿಯ ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್ನಲ್ಲಿ ಡಾ.ಸಚ್ಚಿದಾನಂದ ಸಿನ್ಹಾರವರ ಹಂಗಾಮಿ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಭೆಯು ಸಭೆ ಸೇರಿತು . ಸಂವಿಧಾನ ರಚನೆಯ 2 ನೇ ಸಭೆಯು ಡಿಸೆಂಬರ್ 11 , 1946 ರಲ್ಲಿ ಸೇರಿತು . ಸಂವಿಧಾನ ರಚನೆಗೆ ಸಂಬಂಧಿಸಿದಂತೆ ಸೇರಿದ 2 ನೇ ಸಭೆಯಲ್ಲಿ ಸಂವಿಧಾನ ರಚನಾ ಸಭೆಯ ಅಧ್ಯಕ್ಷರನ್ನಾಗಿ ಡಾಬಾಬು ರಾಜೇಂದ್ರ ಪ್ರಸಾದ್ರವರನ್ನು , ಉಪಾಧ್ಯಕ್ಷರಾಗಿ ಡಾ | ಎಚ್.ಸಿ.ಮುಖರ್ಜಿಯವರನ್ನು , ಸಲಹೆಗಾರರನ್ನಾಗಿ ಬಿ.ಎನ್.ರಾಯ್ರವರನ್ನು ಆಯ್ಕೆ ಮಾಡಲಾಯಿತು . 1947 ಆ .14 ರಂದು ಸಂವಿಧಾನ ವಿವಿಧ ಸಮಿತಿಗಳನ್ನು ಸಂವಿಧಾನ ರಚನೆಗೆ ರಚಿಸಲಾಯಿತು . ಭಾರತದ ಸಂವಿಧಾನ ರಚನಾ ಒಟ್ಟು ಸಮಿತಿಗಳು -22 ಸಮಿತಿಗಳನ್ನು ರಚಿಸಲಾಯಿತು . ಅವುಗಳಲ್ಲಿ 10 ಪ್ರಮುಖ ಸಮಿತಿಗಳು , 12 ಉಪಸಮಿತಿಗಳು , 1947 ಆಗಸ್ಟ್ 29 ರಂದು ಭಾರತದ ಸಂವಿಧಾನ ರಚಿಸಲು ಕರಡು ಸಮಿತಿಯನ್ನು ರಚಿಸಲಾಯಿತು . ಸಂವಿಧಾನ ರಚನಾ ಸಭೆಯ ಕರಡು ಸಮಿತಿ ಅಧ್ಯಕ್ಷರು- ಡಾ | ಬಿ.ಆರ್ . ಅಂಬೇಡ್ಕರ್ , ಸಂವಿಧಾನ ರಚನಾ ಸಭೆಯ ಮೂಲಭೂತ ಹಕ್ಕುಗಳ , ಅಲ್ಪಸಂಖ್ಯಾತರ , ಬುಡಕಟ್ಟು ವರ್ಗದವರ ಸಮಿತಿ ಅಧ್ಯಕ್ಷರು – ಸರ್ದಾರ್ ವಲ್ಲಭ ಪಟೇಲ್ . ಭಾರತದ ಮೊದಲ ಸಂಸತ್ ಸಾರ್ವತ್ರಿಕ ಚುನಾವಣೆ ನಂತರ ಏ .17 , 1952 ರಂದು ಅಸ್ಥಿತ್ವಕ್ಕೆ ಬಂದಿತು . ಭಾರತದ ಮೂಲ ಸಂವಿಧಾನವು 22 ಭಾಗಗಳನ್ನು ಒಳಗೊಂಡಿದ್ದು , 395 ವಿಧಿಗಳನ್ನು ಒಳಗೊಂಡಿದ್ದು , 8 ಅನುಸೂಚಿಗಳನ್ನು ಒಳಗೊಂಡಿದ್ದು , 1,17,369 ಪದಗಳಿಂದಕೂಡಿದೆ . ಭಾರತದ ಸಂವಿಧಾನವು 1951 ಜೂನ್ 18 ರಂದು ಮೊದಲ ಬಾರಿಗೆ ತಿದ್ದುಪಡಿಯಾಗಿತ್ತು . ಇತ್ತೀಚೆಗೆ 2012 ರಲ್ಲಿ ಆದ 98 ನೇ ಸಂವಿಧಾನ ತಿದ್ದುಪಡಿಗಳಿಂದಾಗಿದೆ . Bharatada Samvidhana Lakshanagalu in Kannada ಪ್ರಸ್ತುತ ಭಾರತದ ಸಂವಿಧಾನದಲ್ಲಿ ಒಟ್ಟು 25 ಭಾಗಗಳು ( ಮೂಲ ಸಂಖ್ಯೆ ಬದಲಾವಣೆಯಾಗದೆ 7 ನೇ ಭಾಗವನ್ನು ತೆಗೆದುಹಾಕಿ 4 ಎ , 9 ಎ , 14 ಎ , 9 ಬಿ ಸೇರ್ಪಡೆಯಾಗಿವೆ ) 12 ಅನುಸೂಚಿಗಳು ( 9,10,11,12 ನೇ ಅನುಸೂಚಿ ಸೇರ್ಪಡೆ ) , 450 ವಿಧಿ ( 20 ವಿಧಿಗಳನ್ನು ತೆಗೆದು ಹಾಕಿ 76 ವಿಧಿಗಳನ್ನು ಸೇರಿಸಲಾಗಿದೆ ) ಒಳಗೊಂಡಿದೆ . ಭಾರತದ ಸಂವಿಧಾನವು ವಿಶ್ವದಲ್ಲೇ ಅತಿ ದೊಡ್ಡ ರಾಷ್ಟ್ರೀಯ ಸಂವಿಧಾನವಾಗಿದೆ . ಭಾರತ ಸರ್ಕಾರ ಕಾಯ್ದೆ ( 1935 ) ರಿಂದ ಸಂಯುಕ್ತ ಪದ್ಧತಿ , ರಾಜ್ಯಪಾಲರ ಕಛೇರಿ ತುರ್ತುಪರಿಸ್ಥಿತಿ , ಸಾರ್ವಜನಿಕ ಸೇವೆಗಳು ನ್ಯಾಯಾಂಗ ಪದ್ಧತಿಗಳನ್ನು ಎರವಲು ಪಡೆಯಲಾಯಿತು . ಬ್ರಿಟನ್ ಸಂವಿಧಾನದಿಂದ ಸಂಸದೀಯ ಪದ್ಧತಿ , ಕಾನೂನಿನ ಪದ್ಧತಿ , ಶಾಸಕಾಂಗೀಯ ಪದ್ಧತಿ , ಏಕಪೌರತ್ವ , ಕ್ಯಾಬಿನೇಟ್ ಪದ್ಧತಿ , ರಿಟ್ಗಳು , ಸಂಸದೀಯ ಸವಲತ್ತು , ದ್ವಿಸದನ ಪದ್ಧತಿಗಳನ್ನು ಎರವಲು ಪಡೆಯಲಾಯಿತು . ಅಮೆರಿಕಾದ ಸಂವಿಧಾನದಿಂದ ಮೂಲಭೂತ ಹಕ್ಕುಗಳು , ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ , ನ್ಯಾಯಾಂಗ ಪರಾಮರ್ಶೆ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಸುಪ್ರೀಂಕೋಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರ ಮಹಾಭಿಯೋಗಗಳನ್ನುಎರವಲು ಪಡೆಯಲಾಯಿತು . ಆಸ್ಟ್ರೇಲಿಯಾ ಸಂವಿಧಾನದಿಂದ ಸಮವರ್ತಿಪಟ್ಟಿ ಮುಕ್ತ ವ್ಯಾಪಾರ , ವಾಣಿಜ್ಯ & ಅಂತರಸಂಬಂಧ ಸಂಸತ್ತಿನ ಜಂಟಿ ಸದನದಿಂದ ಎರವಲು ಪಡೆಯಲಾಯಿತು . ಐರಿಷ್ ಸಂವಿಧಾನದಿಂದ ರಾಜ್ಯ ನಿರ್ದೇಶಕ ತತ್ವಗಳು , ರಾಜ್ಯಸಭೆಗೆ ಸದಸ್ಯರ ನೇಮಕ , ರಾಷ್ಟ್ರಪತಿ ಚುನಾವಣಾ ವಿಧಾನವನ್ನು ಎರವಲು ಪಡೆಯಲಾಗಿದೆ . ಸಂವಿಧಾನ ರಚನಾ ಸಭೆಯು ಒಟ್ಟು 11 ಅಧಿವೇಶನಗಳಲ್ಲಿ 2 ವರ್ಷ 11 ತಿಂಗಳು 18 ದಿನಗಳ ಅವಧಿಯಲ್ಲಿ ಸಂವಿಧಾನ ರಚಿಸಿತು .
Bharatada Samvidhana Lakshanagalu in Kannada
ಭಾರತದ ಸಂವಿಧಾನದ ಬಹುತೇಕ ಅಂಶಗಳು 1935 ರ ಭಾರತ ಸರ್ಕಾರ ಕಾಯ್ದೆಯನ್ನು ಆಧರಿಸಿ ರಚಿಸಲಾಗಿದೆ . ಭಾರತದ ಸಂವಿಧಾನವನ್ನು ಸಂವಿಧಾನ ರಚನಾ ಸಭೆಯಿಂದ ನ .26 , 1949 ರಂದು ಅಂಗೀಕರಿಸಲಾಯಿತು . ಭಾರತದ ಸಂವಿಧಾನವನ್ನು ಸಂಪೂರ್ಣವಾಗಿ ಜ .26 , 1950 ರಂದು ಜಾರಿಗೆ ತರಲಾಯಿತು . ಭಾರತವು ಕಾಮನ್ ವೆಲ್ತ್ಗೆ ಸೇರ್ಪಡೆಯಾದುದ್ದು ಆಗಸ್ಟ್ 15,1947 ಅದರ ಸದಸ್ಯತ್ವವನ್ನು ಮತ್ತೆ ನವೀಕರಿಸಿದ್ದು ಮೇ 1950 ರಲ್ಲಿ . ಭಾರತವು ರಾಷ್ಟ್ರೀಯ ಧ್ವಜವನ್ನು ಅಳವಡಿಸಿಕೊಂಡಿದ್ದು ಜುಲೈ 22 , 1947 ರಲ್ಲಿ .ಭಾರತವು ರಾಷ್ಟ್ರ ಗೀತೆಯನ್ನು ಅಳವಡಿಸಿಕೊಂಡಿದ್ದು ಜ .24 , 1950 ರಲ್ಲಿ . ಭಾರತವು ನಾಡಗೀತೆಯನ್ನು ಅಳವಡಿಸಿಕೊಂಡಿದ್ದು ಜ .24 , 1950 ಭಾರತ ಸಂವಿಧಾನದ ಪಿತಾಮಹ ಯಾರು? ಡಾ ಅಂಬೇಡ್ಕರ್ ಭಾರತದ ಸಂವಿಧಾನದ ಬಹುತೇಕ ಅಂಶಗಳು ……..ನ್ನು ಆಧರಿಸಿ ರಚಿಸಲಾಗಿದೆ . 1935 ರ ಭಾರತ ಸರ್ಕಾರ ಕಾಯ್ದೆ